Total Pageviews

Tuesday, August 21, 2012

ಒಲವಿನ ರಾಗ




ಹನಿಯೊಂದು ನದಿಯನ್ನು ಚುಂಬಿಸಿದಾಗ, 
ಒಲವೊಂದು ನನ್ನೆದೆಯ ಅಪ್ಪಿಕೊಂಡಾಗ, 
ಮೂಡಿ ಬಂತೊಂದು, ಮೂಡಿ ಬಂತೊಂದು, 
ಮೂಡಿ ಬಂತೊಂದು ಅಲೆಅಲೆಯ ತರಂಗ ! 
 
ಚಿಲಿಪಿಲಿ ಹಾಡಿದೆ ಮರದ ಗೂಡಲಿ, 
ಚೆಲ್ಲಾಪಿಲ್ಲಿ ಆಗಿದೆ ಮನದ ಮಹಲಲಿ. 
ತಂಗಾಳಿ ಮೈಸೋಕಿ ನಡುಗಿ ನಿಂತಾಗ, 
ನಿನ್ನ ತೋಳಲಿ ದೊರೆತಿದೆ ಬೆಚ್ಚನೆ ಜಾಗ! 
 
ಮಳೆಸುರಿದು ಒಲಾಡಿ ನದಿಯ ಸೇರಿದೆ, 
ನಿನ್ನ ಪ್ರೀತಿ ಕೈಚಾಚಿ ನನ್ನ ಕರೆದಿದೆ. 
ಕೈ ಹಿಡಿದು ಜೊತೆಯಲ್ಲಿ ನೀನು ನಡೆದಾಗ 
ನಸು ನಗುತಾ ಬರೆದಾಯ್ತು ಒಲವಿನ ರಾಗ!! 

1 comment:

Unknown said...

I was searching pics for Ghatikallu n thats how i came across your blog.
Loved this poem "olavina raaga".
Its got very simple but cute statements :) Kudos

I hve written couple of them. U cn find them here.
http://supreethpoems.blogspot.com

Voices in my head

I am never alone Those days have gone long There are voices, there are voices… There are voicessssss up - when I close my eyes ...